18 ಗಂಟೆ ಕೆಲಸ ಮಾಡೋರು ಎಷ್ಟೊಂದು ಮಂದಿ!

ನೆಲದ ಮಾತು

ಪಠಾನ್ ಕೋಟ್ನಲ್ಲಿ ಉಗ್ರರ ದಾಳಿಯಾದಾಗ ಭಾರತ ಈ ಬಾರಿ ಅಳುತ್ತ ಕೂರಲಿಲ್ಲ. ವಿಯೆಟ್ನಾಂನೊಂದಿಗೆ ಗಟ್ಟಿ ಬಾಂಧವ್ಯ ಹೊಂದುವ ಮೂಲಕ ಚೈನಾಕ್ಕೆ ಸಮರ್ಥ ಸಂದೇಶ ಕೊಟ್ಟಿತು. ಪಾಕೀಸ್ತಾನದ ಮೂಲಕ ಚೈನಾ ನಮ್ಮ ಮೇಲೆರಗಬಹುದಾದರೆ ವಿಯೆಟ್ನಾಂನ ಮೂಲಕ ನಾವೂ ಚೈನಾದೊಂದಿಗೆ ಕಬಡ್ಡಿ ಆಡಬಹುದೆನ್ನುವುದು ಜಗತ್ತಿಗೇ ಅರ್ಥವಾಯ್ತು. ವಿಯೆಟ್ನಾಂ ಬಲಹೀನತೆಯಿಂದ ನರಳುತ್ತಿತ್ತು. ಭಾರತದ ಸಹಕಾರ ಸಿಕ್ಕೊಡನೆ ತಮಗೆ ಸಂಬಂಧಿಸಿದ ಸಮುದ್ರದಲ್ಲಿ ತೈಲ ತೆಗೆಯುವ ಜವಾಬ್ದಾರಿಯನ್ನು ಹೊರಬೇಕೆಂದು ನಮ್ಮನ್ನೇ ಕೇಳಿಕೊಂಡಿತು. ಚೀನಾಕ್ಕಿದು ಕಿರಿಕಿರಿ. ಇದು ಇಷ್ಟಕ್ಕೇ ನಿಲ್ಲಲಿಲ್ಲ. ಅಮೇರಿಕಾ ದಕ್ಷಿಣ ಚೀನೀ ಸಮುದ್ರದಲ್ಲಿ ಚೈನಾದ ಏಕಸ್ವಾಮ್ಯ ಮುರಿಯಲು ಜಂಟಿ ಗಸ್ತು ಯೋಜನೆಗೆ ಭಾರತವನ್ನು ಆಹ್ವಾನಿಸಿತು. ಈ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ ಭಾರತ ಅವಶ್ಯಕತೆ ಬಿದ್ದರೆ ಕೈ ಜೋಡಿಸುವುದಾಗಿ ಹೇಳಿ ಚೈನಾದ ಆತಂಕ ಹಾಗೆಯೇ ಇರುವಂತೆ ನೋಡಿಕೊಂಡಿತು

manohar-parrikar_759

ಒಂದೆಡೆ ಭಾರತ ತುಂಡಾಗಲೆಂದು ಅರಚಾಡುವ ಯುವ ಸಮಾಜ, ಅವರಿಗೆ ಬೆಂಬಲವಾಗಿ ನಿಂತ ದೇಶದ್ರೋಹಿಗಳು; ಮತ್ತೊಂದೆಡೆ ಕುತ್ತಿಗೆ ಕತ್ತರಿಸಿದರೂ ಭಾರತ ಮಾತೆಗೆ ಜೈ ಎನ್ನಲಾರೆ ಎನ್ನುವವ. ಇವರ ನಡುವೆ ಅತ್ಯಂತ ಶಾಂತವಾಗಿ ಕೆಲಸ ಮಾಡುತ್ತಿರುವ ಕೇಂದ್ರ ಸಕರ್ಾರದ ಮಂತ್ರಿಗಳು.
ವಿದೇಶ ಮಂತ್ರಿಯಾಗಿ ಕಣ್ಣುಕುಕ್ಕುವಂತೆ ಚಟುವಟಿಕೆಯಲ್ಲಿ ನಿರತರಾಗಿರುವ ಸುಷ್ಮಸ್ವರಾಜ್, ರೈಲು ಯಾನದಲ್ಲಿ ಅಭೂತಪೂರ್ವ ಬದಲಾವಣೆಗೆ ಕಾರಣವಾದ ಸುರೇಶಪ್ರಭು; ರಸ್ತೆ ನಿಮರ್ಾಣದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ನಿತಿನ್ ಗಡ್ಕರಿ, ವಿನಾಕಾರಣ ಸುದ್ದಿ ಮಾಡುತ್ತಲೇ ಶಾಂತವಾಗಿ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯತೆಗೆ ಬದ್ಧವಾಗಿರುವ ಸ್ಮೃತಿ ಇರಾನಿ; ಅನಧಿಕೃತವಾಗಿ ಸಕರ್ಾರಿ ಬಂಗಲೆಗಳಲ್ಲಿ ವಾಸವಾಗಿದ್ದವರನ್ನು ಮುಲಾಜಿಲ್ಲದೇ ಹೊರದಬ್ಬಿದ ವೆಂಕಯ್ಯನಾಯ್ಡು, ವಿದ್ಯುತ್ ಕ್ಷೇತ್ರದಲ್ಲಿ ಮಿಂಚಿನ ವೇಗದಲ್ಲಿ ಫಲಿತಾಂಶ ನೀಡುತ್ತಿರುವ ಪೀಯೂಷ್…

View original post 700 more words

ಘಜ್ನಿ-ಘೋರಿಯರನ್ನೇ ನುಂಗಿದವರಿಗೆ ಅಮೀರ್ ಖಾನ್ ಯಾವ ಲೆಕ್ಕ!!

ನೆಲದ ಮಾತು

ಇಷ್ಟಕ್ಕೂ ಇಂದು ನಾವು ಸ್ವಲ್ಪ ಆಕ್ರೋಶಗೊಂಡಿರೋದು ಏಕೆ ಗೊತ್ತಾ? ಅಮೀರ್ಖಾನ್ ದೇಶ ಬಿಟ್ಟು ಹೋಗುವ ಮಾತಾಡಿದ ಅಂತ ಅಷ್ಟೇ. ನಮ್ಮ ಧರ್ಮ, ಆಚರಣೆ ಇವೆಲ್ಲವುಗಳಿಗಿಂತ ನಮಗೆ ದೇಶವೇ ದೊಡ್ಡದು. ಅದನ್ನು ನಾವು ಬಿಟ್ಟುಕೊಡಲು ಸಾಧ್ಯವೇ ಇಲ್ಲ. ಹಾಗೆ ಅದನ್ನ ಬಿಟ್ಟಮೇಲೆ ಇನ್ನು ಬದುಕಿದ್ದು ಪ್ರಯೋಜನವೇನು ಹೇಳಿ. ಹಾಗಂತ ಈಗಲೂ ಅಸಹಿಷ್ಣುಗಳಾಗಿಲ್ಲ. ಅಮೀರ್ನ ವಿರುದ್ಧ ಸಾಮಾಜಿಕ ತಾಣಗಳಲ್ಲಿ ನೋವು ತೋಡಿಕೊಳ್ಳುತ್ತಿದ್ದೇವೆ ಅಷ್ಟೇ. ಅಮೀರ್ ಖಾನ್ಗೆ ದೇಶವನ್ನೇ ದೂಷಿಸುವಷ್ಟು ವಾಕ್ ಸ್ವಾತಂತ್ರ್ಯ ಇರಬಹುದಾದರೆ, ನನಗೆ ಅವನನ್ನು ದೂಷಿಸುವಷ್ಟು ಬೇಡವೇ?

amirಶಾಂತವಾಗಿ, ಸದಾ ಸಂತುಷ್ಟವಾಗಿ, ಎಲ್ಲರನ್ನೂ ಪ್ರೀತಿಸುತ್ತ ಸಹಿಷ್ಣುವಾಗಿ ಇದ್ದ ಭಾರತದ ಮೇಲೆ ಘಜ್ನಿ-ಘೋರಿಯರು ದಾಳಿ ಮಾಡಿದರು. ಉದ್ದೇಶ ಲೂಟಿಗೈಯ್ಯುವುದೇ ಆಗಿತ್ತು. ಆದರೆ ಅವರು ಅಷ್ಟಕ್ಕೇ ತೃಪ್ತರಾಗದೇ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗೈದರು; ಮಂದಿರಗಳನ್ನು ಉರುಳಿಸಿ, ಮೂತರ್ಿಗಳನ್ನು ಭಗ್ನಗೈದರು. ಹಿಂದೂ ಧರ್ಮದೆಡೆಗಿನ ತಮ್ಮ ಅಸಹಿಷ್ಣುತೆಯನ್ನು ಚೆನ್ನಾಗಿಯೇ ಪ್ರದಶರ್ಿಸಿದರು. ನಲಂದಾದಂತಹ ವಿಶ್ವವಿದ್ಯಾಲಯಕ್ಕೆ ಬೆಂಕಿಹಚ್ಚಿ ಸಾಹಿತ್ಯ ನಷ್ಟ ಮಾಡಿದರು. ಬೌದ್ಧಿಕ ಸಂಪತ್ತನ್ನು ಸೂರೆಗೈದರು. ಹಿಂದುವಾಗಿರುವುದಕ್ಕೆ ತೆರಿಗೆ ಕಟ್ಟಿ ಬದುಕಬೇಕಾದ ವಾತಾವರಣ ನಿಮರ್ಿಸಿದರು. ಇವಿಷ್ಟನ್ನೂ ಕೇಳಿದಾಗ ಕಣ್ಣು ನಿಗಿ ನಿಗಿ ಕೆಂಡವಾಗುತ್ತದೆ; ರಕ್ತವೆಲ್ಲಾ ಕೊತಕೊತನೆ ಕುದ್ದು ಹೋಗುತ್ತದೆ. ಆದರೆ ಮರುಕ್ಷಣವೇ ನಾವು ಶಾಂತರಾಗಿಬಿಡುತ್ತೇವೆ. ಟಿಪ್ಪು ಮಾಡಿದ ತಪ್ಪಿಗೆ ಈಗಿನವರು ಹೇಗೆ ಹೊಣೆಯಾಗುತ್ತಾರೆಂದು ನಮಗೆ ನಾವೇ ಕೇಳಿಕೊಳ್ಳುತ್ತೇವೆ. ಏಕೆಂದರೆ ನಾವು ಸಹಿಷ್ಣುಗಳು!

ಸ್ವಾತಂತ್ರ್ಯ ಬಂದ ಮೇಲೆ ನಮ್ಮ ಪಠ್ಯದಲ್ಲಿ ಶಿವಾಜಿಯ, ರಾಣಾ ಪ್ರತಾಪರ ಕಥೆ ಸೇರಿಸಿದರೆ ಒಂದು ವರ್ಗಕ್ಕೆ ನೋವಾಗಬಹುದೂಂತ ಅವರನ್ನು ಆಚೆಗಟ್ಟಿದೆವು. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಸಾವರ್ಕರರು ದೇಶ ವಿಭಜನೆಯ…

View original post 699 more words